[ಫೈರ್ಫಾಕ್ಸಿನಲ್ಲಿ ಹೊಸತೇನಿದೆ] ಇತ್ತೀಚಿನ ಫೈರ್ಫಾಕ್ಸಿನೊಂದಿಗೆ ನೀವು ಮಾಡಬೇಕಿಂದಿರುವ ಕೆಲಸವನ್ನು ಈಗ ಸುಲಭವಾಗಿ ಮತ್ತು ವೇಗವಾಗಿ ಮಾಡಬಹುದು. ಮರುವಿನ್ಯಾಸಗೊಳಿಸಲಾದ ನೆಲೆಪುಟದಿಂದ, ಸಾಮಾನ್ಯವಾಗಿ ಬಳಸಲಾಗುವ ಮೆನು ಆಯ್ಕೆಗಳಿಗೆ ನೀವು ಸುಲಭವಾಗಿ ಹೋಗಬಹುದಾಗಿರುತ್ತದೆ. ಇಳಿಕೆಗಳು (ಡೌನ್ಲೋಡ್ಗಳು), ಬುಕ್ಮಾರ್ಕುಗಳು, ಇತಿಹಾಸ, ಆಡ್-ಆನ್ಗಳು, ಸಿಂಕ್ ಮತ್ತು ಸಿದ್ಧತೆಗಳಂತವು. [ಹೊಸ ಟ್ಯಾಬ್ ಪುಟ] ನಿಮ್ಮ ಹೊಸ ಟ್ಯಾಬ್ ಪುಟಕ್ಕೆ ನಾವು ಹೊಸ ಸುಧಾರಣೆಗಳನ್ನು ಮಾಡಿದ್ದೇವೆ. ಹೊಸ ಟ್ಯಾಬ್ ಪುಟದ ಸಹಾಯದಿಂದ ಈಗ ನೀವು ಇತ್ತೀಚಿಗೆ ಮತ್ತು ಹೆಚ್ಚು ಬಾರಿ ಭೇಟಿ ನೀಡಿದ ತಾಣಗಳಿಗೆ ಕೇವಲ ಒಂದು ಕ್ಲಿಕ್ನಲ್ಲಿಯೆ ತೆರಳಲು ಸಾಧ್ಯವಿರುತ್ತದೆ. ಹೊಸ ಟ್ಯಾಬ್ ಪುಟವನ್ನು ಆರಂಭಿಸಲು ಬಳಸಲು, ನಿಮ್ಮ ಜಾಲವೀಕ್ಷಕದ ಮೇಲ್ಭಾಗದಲ್ಲಿನ '+' ಎನ್ನುವುದರ ಮೇಲೆ ಕ್ಲಿಕ್ ಮಾಡಿ ಹೊಸ ಟ್ಯಾಬೊಂದನ್ನು ಸೃಷ್ಟಿಸಿ. ಹೊಸ ಟ್ಯಾಬ್ ಪುಟವು ಈಗ ನಿಮ್ಮ ಆಸಮ್ ಬಾರ್ ಇತಿಹಾಸದಿಂದ ನೀವು ಇತ್ತೀಚೆಗೆ ಮತ್ತು ಪದೇ ಪದೇ ಭೇಟಿ ನೀಡಿದ ಜಾಲತಾಣಗಳ ಅಡಕಚಿತ್ರಗಳನ್ನು ತೋರಿಸುತ್ತದೆ. ನಿಮ್ಮ ಹೊಸ ಟ್ಯಾಬ್ ಪುಟದಲ್ಲಿನ ಅಡಕಚಿತ್ರಗಳನ್ನು ಕ್ಲಿಕ್ ಮಾಡಿ ನಂತರ ಎಳೆದು ನಿಮಗೆ ಬೇಕೆಂದ ಕ್ರಮದಲ್ಲಿ ಇರಿಸಲು ಸಾಧ್ಯವಿರುತ್ತದೆ. ತಾಣವನ್ನು ಒಂದು ಜಾಗದಲ್ಲಿ ಬಂಧಿಸಲು ಒತ್ತುಪಿನ್ ಅನ್ನು, ಅಥವ ತೆಗೆದುಹಾಕಲು 'X' ಗುಂಡಿಯನ್ನು ಕ್ಲಿಕ್ ಮಾಡಿ. ಹೊಸತಾದ ಖಾಲಿ ಟ್ಯಾಬ್ ಪುಟಕ್ಕೆ ಮರಳಲು ಪುಟದ ಮೇಲ್ಭಾಗದ ಬಲಮೂಲೆಯಲ್ಲಿರುವ 'ಚೌಕಜಾಲ' (ಗ್ರಿಡ್) ಚಿಹ್ನೆಯ ಮೇಲೆ ಕ್ಲಿಕ್ ಮಾಡಿ. ಇತ್ತೀಚಿನ ಫೈರ್ಫಾಕ್ಸ್ ಅನ್ನು ಈಗಲೆ ಪಡೆಯಿರಿ ಮತ್ತು ಈ ಹೊಸ ಸವಲತ್ತನ್ನು ಇಂದಿನಿಂದಲೆ ಬಳಸಲು ಪ್ರಾರಂಭಿಸಿ!